ನಾಯರ್ ಕಲ್ಲು ಎನ್ನುವ ಸ್ಥಳವು ಸುಳ್ಯ ತಾಲೂಕಿನ ಅಮರ ಮುಡ್ನೂರು ಗ್ರಾಮದ ಪೂರ್ವ ಭಾಗದಲ್ಲಿದೆ. ಪೈಲಾರು ಎನ್ನುವ ಸ್ಥಳಕ್ಕೆ ಸಮೀಪವರ್ತಿಯಾಗಿದೆ. == ಇತಿಹಾಸ == ಚಾತು ನಾಯರ್ ಎನ್ನುವ ಹೆಸರು ಮಲೆಯಾಳ ಭಾಷೆಯಲ್ಲಿ ಐತಿಹಾಸಿಕ ಪುರುಷನೊಬ್ಬನ ಹೆಸರಾಗಿದೆ. ಇವನು ಸುಳ್ಯ ಕೋಡಿ ಕೊಟ್ಟಾರದಲ್ಲಿದ್ದು ಆಡಳಿತ ನಡೆಸಿದ್ದನು. ತನ್ನ ಜೀವಿತದ ಕೊನೆಯಲ್ಲಿ ಉಲ್ಲಾಕುಳು ದೈವಗಳಿಂದ ಉಬರಡ್ಕದ ಹೊಳೆಯಲ್ಲಿ ಮಾಯಕನಾದನು. ಆ ಬಳಿಕ ದೈವನಾದನು. ಇವನು ದೈವನಾದ ಬಳಿಕ ಪ್ರಸರಣ ಹೊಂದಿ ಸುಳ್ಯ ಸೀಮೆಯಲ್ಲಿ ಆರಾಧನೆಯಾಗುವ ದೈವವಾಗಿದ್ದಾನೆ. ಉಬರಡ್ಕದಲ್ಲಿ ಮಾಯಕ ಸೇರಿ, ದೈವವಾದ ಚಾತು ನಾಯರ್ ತಾನು ಆಡಳಿತ ನಡೆಸುತ್ತಿದ್ದ ಬೀಡು ಕೇಂದ್ರ ನೆಲೆಗಳಲ್ಲಿ ಆರಾಧನೆ ಪಡೆಯುತ್ತಾನೆ. ಸುಳ್ಯ ಕೋಡಿಯಿಂದ ಹೊರಟ ಚಾತು ನಾಯರ್ ಸುಳ್ಯದ ಕಾನತ್ತಿಲ, ತೊಡಿಕ್ಕಾನ, ಮರ್ಕಂಜಕ್ಕೆ ಬರುತ್ತಾನೆ. ಮರ್ಕಂಜದಲ್ಲಿ ನೆಲೆಯಾದ ಅಮರ ಮುಡ್ನೂರು ಚೊಕ್ಕಾಡಿಗೆ ಬಂಟಮಲೆಯ ಮೂಲಕ ಬಂದು ಆಯಾಸಗೊಂಡು ಬಂದು ಅಮರ ಮುಡ್ನೂರಿಗೆ ಸೇರಿದ ಎತ್ತರದ ಬೆಟ್ಟದ ಕಲ್ಲೊಂದರಲ್ಲಿ ಕುಳಿತು ಪಶ್ಚಿಮಾಭಿಮುಖವಾಗಿ ನೋಡುತ್ತಾನೆ. ಅಮರ ಮುಡ್ನೂರಿಗೆ ಪ್ರವೇಶವಾಗಿ, ಪ್ರಥಮತಃ ಕುಳಿತ ಕಲ್ಲೇ ಮುಂದೆ ನಾಯರ್ ಕಲ್ಲೆಂದು ಕರೆದುಕೊಂಡಿತು. ಈ ನಾಯರ್ ಕಲ್ಲೆಂದು ಕರೆದುಕೊಳ್ಳುವ ಸ್ಥಳದಲ್ಲಿ ಕೆಲ ಗೌಡ ಕುಟುಂಬಗಳು ನೆಲೆಯಾಗಿದ್ದು, ಕ್ಷೇತ್ರಾಧೀಶನೆಂದು ಕರೆದುಕೊಳ್ಳುವ ಈ ನಾಯರ್ ದೈವವನ್ನು ಇವರು ಆಚರಿಸುತ್ತಾರೆ. ನಾಯರ್ ಕಲ್ಲಿಗೆ ಇವರು ದೈವ ಮಹಾತ್ಮೆಯ ಹಿನ್ನೆಲೆಯಲ್ಲಿ ವಿಶೇಷ ಗೌರವವನ್ನು ಶ್ರದ್ಧೆಯನ್ನು ತೋರಿಸುತ್ತಾರೆ. ಸೂತಕ ಇತ್ಯಾದಿ ಮೈಲಿಗೆಯವರು ಈ ಕಲ್ಲಿನ ಹತ್ತಿರವಾಗಲೀ, ಹತ್ತುವ ಸಾಹಸವನ್ನಾಗಲೀ ಮಾಡಬಾರದೆನ್ನುವ ಕಟ್ಟಳೆಗಳಿವೆ. == ಆರಾಧನೆ == ದೀಪಾವಳಿ ಮಕರ ಸಂಕ್ರಾಂತಿ ನವರಾತ್ರಿ ಶಿವರಾತ್ರಿ == ಕೃಷಿ == ಅಡಿಕೆ ತೆಂಗು ರಬ್ಬರ್ ಕರಿಮೆಣಸು ಬಾಳೆ ಕೊಕ್ಕೊ == ಸಮುದಾಯ == ಗೌಡ ಬ್ರಾಹ್ಮಣ ನಾಯ್ಕ ಬಂಟ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಮುಸಲ್ಮಾನ == ಭಾಷೆಗಳು == ಕನ್ನಡ ಅರೆಭಾಷೆ ಮಲೆಯಾಳ ಭಾಷೆ ಉರ್ದು == ಉಲ್ಲೇಖ ==